()
ನಾ ಮಾಡಿದ ಭಾಷಣದಲ್ಲಿ
ನಾನೇನು ಮಾತನಾಡಿರಲಿಲ್ಲ.
ಸಭಾಭವನದ ಮುಂದಿನ ಜನರು
ಕೂಗಿದ್ದರು, ಕಿರುಚಿದ್ದರು,ಸಿಳ್ಳೆ ಹಾಕಿದ್ದರು
ನಾನೇನು ಮಾತನಾಡಿರಲಿಲ್ಲ.
ಬಡತನದ ಬೇಗೆಯಲಿ ಸುಸ್ತಾಗಿ ಸತ್ತು
ಬಂದ ಉಸಿರದು ,
ಆ ಪವನ ತರಂಗಗಳೇ ಬಾಯಿಯಿಂದ ಹೊರಬಿದ್ದದ್ದು,
ನಾನೇನು ಮಾತನಾಡಿರಲಿಲ್ಲ.
ಕೂಗಿದ್ದು ಅತ್ತಿದ್ದು ಹಸಿವು ಇಂಗಿಸಾಲಾಗದೆ ಅರಚಿದ್ದು,
ಅಕ್ಷತೆಯಾಗಿ ಬಿದ್ದ ಅಕ್ಕಿಯ ತಿಂದ ಕತೆಯದು
ಒಳಗಿರದೆ ಹೊರಬಂದದ್ದು,
ನಾನೇನು ಮಾತನಾಡಿರಲಿಲ್ಲ.
ಅವಳನ್ನ ಪ್ರೀತಿಸಿದೆ,ಉಸಿರಾಗಿಸಿದೆ,ಪೂಜಿಸಿದೆ
ದುಡ್ಡಿಲ್ಲದಕ್ಕೆ ಅವಳದನರಿಯದೆ ಹೋಗಿದ್ದೆ
ಸಭೆ ಮುಂದೆ ಹೇಳಿದ್ದು ,
ನಾನೇನು ಮಾತನಾಡಿರಲಿಲ್ಲ.
ಎನೂ ಅರಿಯದ ತುಟಿಗಳು ಎಂದಿಗೂ
ನಗುತ್ತಿದ್ದವೆನ್ನವು, ಆ ಜನಸಾಗರದ ಮುಂದೆ,
ನೊಂದು, ಬೆಂದು, ಅಂದು ಅಳುಕಿದ್ದವು,
ನಾನೇನು ಮಾತನಾಡಿರಲಿಲ್ಲ.
ಆತ್ಮಕತೆಯ ಸತ್ಯಾಸತ್ಯತೆಗಳು
ಅನಾವರಣಗೊಂಡಿದ್ದೆ ಹೊರತು
ಕೊನೆಗೂ ನಾನೇನು ಮಾತನಾಡಿರಲಿಲ್ಲ.
ತಪ್ಪಿದ್ದರೆ ಕ್ಷಮೆಸಿ ಎನ್ನುವ
ಸೌಜನ್ಯವು ಬೇಕಿಲ್ಲ ,
ಅವಶ್ಯಕತೆಯು ನನಗಿಲ್ಲ
ಕಾರಣ ನಾನೇನು ಮಾತನಾಡಿರಲಿಲ್ಲ.