()
ಮಧುಮಾಸ ಬಂದಿತು
ಮಾಮರ ಕೋಗಿಲೆ
ಬಾ ಬಾ ಬಾ ಬಾ ಬಾ ಹಾಡು ಬಾ ಹಾಡು ಬಾ
ಸೃಷ್ಟಿಯ ಸೊಬಗಿನ ಮಾಲೆಯ ಧರಿಸಿ
ಕಾದಿಹೆ ನಿನಗಾಗಿ ಅನುದಿನ ಕಾತರಿಸಿ
ಬಾ ಬಾ ಬಾ ಬಾ ಬಾ ಹಾಡು ಬಾ ಹಾಡು ಬಾ
ಇಬ್ಬನಿ ಮುತ್ತಿನ ಮಾಲೆ ಧರಿಸುತ
ಕಾದಿವೆ ಹೂವುಗಳು ದುಂಬಿಯ ಅರಸುತ
ಕಾಮನ ಬಿಲ್ಲಿನ ಬಣ್ಣನು ಚೆಲ್ಲುತ
ಬಾನು ಬಾಗಿದೆ ಭೂಮಿಯ ರಮಿಸುತ
ಬಾ ಬಾ ಬಾ ಬಾ ಬಾ ಹಾಡು ಬಾ ಹಾಡು ಬಾ ||೧||
ಕೃಷ್ಣನ ಮುರಳಿಯ ಮೋಹಕ ನಾದಕೆ
ರಾಧೆಯು ಕುಣಿದಳು ಮೋಹನ ರಾಗಕೆ
ರತಿ ಮನ್ಮಥರ ಮಧುರ ಮಿಲನಕೆ
ನೈದಿಲೆ ನಾಚಿತು ಚಂದ್ರನ ಬಿಂಬಕೆ,
ಬಾ ಬಾ ಬಾ ಬಾ ಬಾ ಹಾಡು ಬಾ ಹಾಡು ಬಾ ||೨||
ಪ್ರೇಮಿಗಳಿಬ್ಬರ ವಿರಹದ ಗಾನ
ವೀಣೆಯು ನುಡಿಯಿತು ಸುಮಧುರ ತಾನ
ನೀರಿನ ಅಲೆಗಳ ಮಂಜುಳ ಗಾನ
ಕವಿಯು ಬರೆದನು ಋತುವಿನ ಕವನ
ಬಾ ಬಾ ಬಾ ಬಾ ಬಾ ಹಾಡು ಬಾ ಹಾಡು ಬಾ ||೩||
ಮಧುಮಾಸ ಬಂದಿತು
ಮಾಮರ ಕೋಗಿಲೆ
ಬಾ ಬಾ ಬಾ ಬಾ ಬಾ ಹಾಡು ಬಾ ಹಾಡು ಬಾ
ಸೃಷ್ಟಿಯ ಸೊಬಗಿನ ಮಾಲೆಯ ಧರಿಸಿ
ಕಾದಿಹೆ ನಿನಗಾಗಿ ಅನುದಿನ ಕಾತರಿಸಿ
ಬಾ ಬಾ ಬಾ ಬಾ ಬಾ ಹಾಡು ಬಾ ಹಾಡು ಬಾ