()
ಪ್ರೀತಿಯಂಬುದು ದೇಹಗಳ ಮಿಲನವಲ್ಲ, ಭಾವಗಳ ಸಮ್ಮಿಲನ!
ಇದಕೆ ಸಾಕ್ಷಿ, ಎಲ್ಲೆ ಇಲ್ಲದ ನಮ್ಮ ಈ ಪ್ರೇಮ ಸಂವಹನ
ನಿನ್ನ ಪರಪಂಚದಲಿ ನಾ ಬಾಳಲಾರೆ
ನನ್ನ ಪರಪಂಚವನು ನೀ ತಾಳಲಾರೆ
ನಿನ್ನ ಸೂರು ಬಾನು, ನಾನು ಈಜುವ ಮೀನು
ದೇಹ ಸೇರದಿದ್ದರೇನು?, ನಮ್ಮ ಪ್ರೀತಿ ಹಾಲು ಜೇನು!
ಒಮ್ಮೆಯಾದರು ಬಾ ಇನಿಯ, ನಿನಗೆ ಬಾಯಾರಿದಾಗ
ಹೋದರೇನಂತೆ ಈ ಜೀವ?, ಭಾವದ ಶೃತಿಸೇರಿದಾಗ!!